ಪೀಠಿಕೆ
ಕನ್ನಡದ ಎಷ್ಟೋಂದು ಪುಸ್ತಕಗಳು ಕಣಜ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸರಕಾರಿ ವಿಶ್ವವಿದ್ಯಾಲಯಗಳು, ಕನ್ನಡ ಸಾಹಿತ್ಯ ಪರಿಷತ್ತು ಹಾಗು ಇನ್ನಿತರೆ ಸಂಸ್ಥೆಗಳ ಅಂತರಜಾಲ ಪುಟಗಳಲ್ಲಿ ಉಚಿತವಾಗಿ ಲಭ್ಯವಿದೆ. ಅದರೆ ಅವ್ಯಾವು ಇ-ಪಬ್ (ಮುಕ್ತ ಹಾಗು ಉಚಿತ ಕಡತ ಸ್ವರೂಪ) ರೂಪದಲ್ಲಿ ಇಲ್ಲ. ಹಾಗಾಗಿ ಅವನ್ನು ಇ-ಪುಸ್ತಕ ರೀಡರ್‌ನಲ್ಲಿ ಓದುವುದು ಕಷ್ಟ. ನಾನು ಮೊದಲಿಗೆ, ನನ್ನ ಸ್ವಂತ ಓದಿಗೆ ಇ-ಪಬ್ ರೂಪಕ್ಕೆ ಈ ಪುಸ್ತಕಗಳನ್ನು ಪರಿವರ್ತಿಸಿಕೊಂಡೆ. ಆದರೆ ಈ ಕಡತಗಳು ನನ್ನಂತಹ ಆನೇಕರಿಗೆ ಉಪಯೋಗವಾಗುತ್ತದೆ ಅನ್ನುವ ಕಾರಣದಿಂದ “ಇ-ಪುಸ್ತಕ ಯೋಜನೆ” ಪ್ರಾರಂಭಿಸಿದೆ. ಈ ಯೋಜನೆಯಡಿ ಪರಿವರ್ತಿಸಿದ ಎಲ್ಲಾ ಪುಸ್ತಕಗಳು ಲಭ್ಯವಿದೆ.
ಇಲ್ಲಿರುವ ಎಲ್ಲಾ ಕಡತಗಳು ಗಿಟ್‌ಹಬ್ ಮತ್ತು ಆರ್ಕೈವ್ ಅಂತರಜಾಲ ಪುಟಗಳಲ್ಲಿ ಲಭ್ಯವಿದೆ. ಲಿಂಕ್‌ಗಳಿಗೆ ಕೆಳಗಿನ ಕೋಷ್ಟಕ ನೋಡಿ.
ಇ ಪುಸ್ತಕಗಳು
ಪರಿವರ್ತನೆಗೆ ಪುಸ್ತಕಗಳನ್ನು ಸೂಚಿಸಿ
ಪರಿವರ್ತನೆಗೆ ಪುಸ್ತಕಗಳನ್ನು ಸೂಚಿಸುವಾಗ ದಯವಿಟ್ಟು ಕೃತಿಸ್ವಾಮ್ಯ ಅವಧಿ ಅಂತ್ಯವಾಗಿರುವ, ಮುಕ್ತ ಪರವಾನಗಿ ಹೊಂದಿರುವ ಅಥವಾ ಕಣಜ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸರಕಾರಿ ವಿಶ್ವವಿದ್ಯಾಲಯಗಳು, ಕನ್ನಡ ಸಾಹಿತ್ಯ ಪರಿಷತ್ತು ಮುಂತಾದ ಸಂಸ್ಥೆಗಳು ಉಚಿತವಾಗಿ, ಓದುಗನ ಮೇಲೆ ಯಾವುದೇ ನಿರ್ಬಂಧ ಹೇರದೆ ಹಂಚಿದ ಪುಸ್ತಕಗಳ ಲಿಂಕ್ ಮಾತ್ರ ಕಳುಹಿಸಿ.
ಕೃತಿಚೌರ್ಯ ಅಥವಾ ಸ್ವಾಮ್ಯಚೌರ್ಯ ಈ ಯೋಜನೆಯ ಉದ್ದೇಶವಲ್ಲ.
ಗಮನಸೆಳೆವ ಕೊಂಡಿಗಳು
- ಇ-ಪಬ್
- EpubPress – ಮುಕ್ತ ತಂತ್ರಾಂಶ
- ಎಫ಼್.ಬಿ ರಿಡರ್ – ಆಂಡ್ರೋಯ್ಡ್ ಕಾರ್ಯಾಚರಣೆ ವ್ಯವಸ್ಥೆಯಲ್ಲಿ ಇ-ಪುಸ್ತಕ ಓದಲು ಒಂದು ಮುಕ್ತ ಹಾಗು ಉಚಿತ ತಂತ್ರಾಂಶ.