ಇ ಪುಸ್ತಕ ಯೋಜನೆ

ಪೀಠಿಕೆ

ಕನ್ನಡದ ಎಷ್ಟೋಂದು ಪುಸ್ತಕಗಳು ಕಣಜ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸರಕಾರಿ ವಿಶ್ವವಿದ್ಯಾಲಯಗಳು, ಕನ್ನಡ ಸಾಹಿತ್ಯ ಪರಿಷತ್ತು ಹಾಗು ಇನ್ನಿತರೆ ಸಂಸ್ಥೆಗಳ ಅಂತರಜಾಲ ಪುಟಗಳಲ್ಲಿ ಉಚಿತವಾಗಿ ಲಭ್ಯವಿದೆ. ಅದರೆ ಅವ್ಯಾವು ಇ-ಪಬ್ (ಮುಕ್ತ ಹಾಗು ಉಚಿತ ಕಡತ ಸ್ವರೂಪ) ರೂಪದಲ್ಲಿ ಇಲ್ಲ. ಹಾಗಾಗಿ ಅವನ್ನು ಇ-ಪುಸ್ತಕ ರೀಡರ್‌ನಲ್ಲಿ ಓದುವುದು ಕಷ್ಟ. ನಾನು ಮೊದಲಿಗೆ, ನನ್ನ ಸ್ವಂತ ಓದಿಗೆ ಇ-ಪಬ್ ರೂಪಕ್ಕೆ ಈ ಪುಸ್ತಕಗಳನ್ನು ಪರಿವರ್ತಿಸಿಕೊಂಡೆ. ಆದರೆ ಈ ಕಡತಗಳು ನನ್ನಂತಹ ಆನೇಕರಿಗೆ ಉಪಯೋಗವಾಗುತ್ತದೆ ಅನ್ನುವ ಕಾರಣದಿಂದ "ಇ-ಪುಸ್ತಕ ಯೋಜನೆ" ಪ್ರಾರಂಭಿಸಿದೆ. ಈ ಯೋಜನೆಯಡಿ ಪರಿವರ್ತಿಸಿದ ಎಲ್ಲಾ ಪುಸ್ತಕಗಳು ಲಭ್ಯವಿದೆ.

ಇಲ್ಲಿರುವ ಎಲ್ಲಾ ಕಡತಗಳು ಗಿಟ್‌ಹಬ್‌ ಮತ್ತು ಆರ್ಕೈವ್ ಅಂತರಜಾಲ ಪುಟಗಳಲ್ಲಿ ಲಭ್ಯವಿದೆ. ಲಿಂಕ್‌ಗಳಿಗೆ ಕೆಳಗಿನ ಕೋಷ್ಟಕ ನೋಡಿ.

ಇ ಪುಸ್ತಕಗಳು

ಪುಸ್ತಕಲೇಖಕಮೂಲಪ್ರಕಾಶಕರುಯೋಜನೆ ಪುಟಇ-ಪಬ್ ಕಡತ
ಸಮಗ್ರ ಗದ್ಯ ೧ಡಾ|| ಜಿ ಎಸ್ ಶಿವರುದ್ರಪ್ಪಕಣಜ > ಕನ್ನಡ > ರಾಷ್ಟ್ರಕವಿ ಕೃತಿ ಸಂಚಯ >
ಡಾ|| ಜಿ ಎಸ್ ಶಿವರುದ್ರಪ್ಪ > ಸಮಗ್ರ ಗದ್ಯ 1
ಕನ್ನಡ ಮತ್ತು ಸಂಸ್ಕೃತಿ ಇಲಾಖೆ,
ಕರ್ನಾಟಕ ಸರ್ಕಾರ
ಗಿಟ್ ಹಬ್
ಆರ್ಕೈವ್
ಆರ್ಕೈವ್
ಸಮಗ್ರ ಗದ್ಯ ೨ಡಾ|| ಜಿ ಎಸ್ ಶಿವರುದ್ರಪ್ಪಕಣಜ > ಕನ್ನಡ > ರಾಷ್ಟ್ರಕವಿ ಕೃತಿ ಸಂಚಯ >
ಡಾ|| ಜಿ ಎಸ್ ಶಿವರುದ್ರಪ್ಪ > ಸಮಗ್ರ ಗದ್ಯ 2
ಕನ್ನಡ ಮತ್ತು ಸಂಸ್ಕೃತಿ ಇಲಾಖೆ,
ಕರ್ನಾಟಕ ಸರ್ಕಾರ
ಗಿಟ್ ಹಬ್ಕಾರ್ಯ ಪ್ರಗತಿಯಲ್ಲಿದೆ.

ಪರಿವರ್ತನೆಗೆ ಪುಸ್ತಕಗಳನ್ನು ಸೂಚಿಸಿ

ಪರಿವರ್ತನೆಗೆ ಪುಸ್ತಕಗಳನ್ನು ಸೂಚಿಸುವಾಗ ದಯವಿಟ್ಟು ಕೃತಿಸ್ವಾಮ್ಯ ಅವಧಿ ಅಂತ್ಯವಾಗಿರುವ, ಮುಕ್ತ ಪರವಾನಗಿ ಹೊಂದಿರುವ ಅಥವಾ ಕಣಜ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸರಕಾರಿ ವಿಶ್ವವಿದ್ಯಾಲಯಗಳು, ಕನ್ನಡ ಸಾಹಿತ್ಯ ಪರಿಷತ್ತು ಮುಂತಾದ ಸಂಸ್ಥೆಗಳು ಉಚಿತವಾಗಿ, ಓದುಗನ ಮೇಲೆ ಯಾವುದೇ ನಿರ್ಬಂಧ ಹೇರದೆ ಹಂಚಿದ ಪುಸ್ತಕಗಳ ಲಿಂಕ್ ಮಾತ್ರ ಕಳುಹಿಸಿ.

ಕೃತಿಚೌರ್ಯ ಅಥವಾ ಸ್ವಾಮ್ಯಚೌರ್ಯ ಈ ಯೋಜನೆಯ ಉದ್ದೇಶವಲ್ಲ.

ಗಮನಸೆಳೆವ ಕೊಂಡಿಗಳು

Do you like this post? Please rate, its just a click :) 1 Star2 Stars3 Stars4 Stars5 Stars (No Ratings Yet)
Loading...