ಅನ್ಯಮತೀಯ
ನಿತ್ಯಾನಂದ ಬಿ ಶೆಟ್ಟಿಯವರ ‘ಅಳವು ಅರಿಯದ ಭಾಷೆ’ ಪುಸ್ತಕಕ್ಕೆ ಇಸ್ಮಾಯಿಲ್ ಅವರು “ಕೇಡಿನ ಭಾಷೆಯೇ ಆಡುಭಾಷೆಯಾದಾಗ…” ಲೇಖನದ ಮೂಲಕ ಪ್ರತಿಕ್ರಿಯಿಸಿದ್ಡಾರೆ. ಸಮಯ ಸಿಕ್ಕಾಗ ಓದಿ. ಆ ಲೇಖನದ ಈ ಎರಡು ಪ್ಯಾರಾಗಳು ನನ್ನ ಮನದಲ್ಲಿ ಉಳಿದಿವೆ. ಆ ದಿನಗಳಲ್ಲಿ ಕರಾವಳಿಯಿಂದ ಪ್ರಕಟವಾಗುತ್ತಿದ್ದ ಸುದ್ದಿ ಮಾಧ್ಯಮಗಳಲ್ಲಿ ಮಾತ್ರ ಬಳಕೆಯಾಗುತ್ತಿದ್ದ ‘ಅನ್ಯಮತೀಯ’ ಎಂಬ ಪದ ಈಗ ಕನ್ನಡ ನಾಡಿನ ಎಲ್ಲಾ ಮಾಧ್ಯಮಗಳಲ್ಲೂ ನಿತ್ಯವೆಂಬಂತೆ ಬಳಕೆಯಾಗುತ್ತದೆ. ಈ ‘ಅನ್ಯ’ರಲ್ಲಿರುವುದು ಯಾರೆಂದು ಈಗ ವಿವರಿಸಬೇಕಾದ ಅಗತ್ಯವೂ ಇಲ್ಲದಷ್ಟೂ ಎಲ್ಲವೂ ಸ್ಪಷ್ಟವಾಗಿಬಿಟ್ಟಿದೆ....


