Project – Nammooral techu

Nammooral techu (ನಮ್ಮೂರಲ್ ಟೆಕ್ಕು) is the new project I am involved with. Idea is to translate technology jargons to Kannada, build vocabulary etc. In a way start discussions around it in Kannada. From the about page

ಇದು ಟೆಕ್ (ಐಸಿಟಿ, ಡೇಟ ಇತ್ಯಾದಿ)ಗೆ ಸಂಬಂಧಿಸಿದ ಕನ್ನಡ ಪದಗಳನ್ನು ಶಬ್ದಕೋಶಕ್ಕೆ ಸೇರಿಸುವ ನಮ್ಮ ಪ್ರಯತ್ನ. ಸದ್ಯಕ್ಕೆ, ಟೆಕ್ ಪದದ ಕನ್ನಡ ಅನುವಾದದೊಂದಿಗೆ ವಾರಕ್ಕೊಮ್ಮೆ ಪೋಸ್ಟ್ ಮಾಡುತ್ತೇವೆ ಹಾಗು ಅಗತ್ಯವಿದ್ದರೆ ವಿವರಣೆಯನ್ನು ಕೂಡ ಸೇರಿಸುತ್ತೇವೆ.
This is an effort to add to Kannada vocabulary on tech (um, ICT, data etc.). For now, we will post once every week along with Kannada translation of the word and an explanation of the concept if needed.

We post once a week. This is our second week. We have the phrase "Privacy by design: ಉದ್ದೇಶಪೂರ್ವಕ ಖಾಸಗಿತನ" this week. Usually we will have English description, Kannada Translation and Kannada Transliterated version. Below I am copying the Kannada version for quick reference

ಉದ್ದೇಶಪೂರ್ವಕ ಖಾಸಗಿತನ ವಿನ್ಯಾಸ ವಿಧಾನದಲ್ಲಿ ಖಾಸಗಿತನ ಕೆಲಸ ಮುಗಿದ ನಂತರದ ತೇಪೆಯಾಗದೆ, ಉತ್ಪನ್ನದ ಮೂಲ ರೂಪರೇಷೆ, ನಿರ್ಮಾಣದ ಕೆಂದ್ರವಾಗಿರುತ್ತದೆ.

ಉದಾಹರಣೆಗೆ, ಸ್ವಲ್ಪ ಆಲೋಚಿಸಿ, ನಾವು ಉಡುಪುಗಳನ್ನು ವಿನ್ಯಾಸಗೊಳಿಸುವಾಗಲೆ ಜೇಬಿನ ವಿನ್ಯಾಸವನ್ನು ಸೇರಿಸಿಕೊಳ್ಳುವುದರಿಂದ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೇವೆಯೋ ಅಥವಾ ನಂತರದ ಹಂತದಲ್ಲಿ ವಿವಿಧ ಬಣ್ಣದ ಬಟ್ಟೆಯ ತೇಪೆಗೊಳೊಂದಿಗೆ ಜೇಬನ್ನು ಹೊಲಿಯಲು ಪ್ರಯತ್ನಿಸಿದರೆ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೇವೆಯೇ?

ದಿನ ನಿತ್ಯದ ಆಚರಣೆಯಲ್ಲಿ, ಖಾಸಗಿತನ ಕೇವಲ ಕಾನೂನು ವಿಭಾಗದ ತಲೆನೋವು ಮಾತ್ರ ಆಗಿರದೆ ಕೆಲಸ ಪ್ರಾರಂಭವಾಗುವ ಮೊದಲಿನಿಂದಲೂ ಅದು ಸಂಸ್ಥೆಯ ಪ್ರತಿಯೊಬ್ಬರ ಕಾಳಜಿಯಾಗಿರಬೇಕು.

ಈ ವಿನ್ಯಾಸ ವಿಧಾನವನ್ನು ಮೊದಲು ಕೆನಡದವರಾದ ಆನ್ ಕ್ಯಾವೊಕಿಯಾನ್ ಮಂಡಿಸಿದರು. ಈಗ ಈ ವಿನ್ಯಾಸ ವಿಧಾನ ಅನೇಕ ಕಾನೂನುಗಳಲ್ಲಿ ಅವಶ್ಯಕತೆಯಾಗಿದೆ ಬಳಸಲಾಗಿದೆ.

If you are interested in Kannada or in Technology, it could be an interesting blog to subscribe. There is also a twitter account to follow. Also let us know what do you think. I think it's very interesting :)