ಭಾನು ಮುಶ್ತಾಕ್ ಹಾಗು ದಸರಾ ಹಬ್ಬ

ಕರ್ನಾಟಕದಲ್ಲಿ ದಸರಾ ಹಬ್ಬವನ್ನು, ಭಾರತದ ಗಣರಾಜ್ಯವಾದ ನಂತರ ನಾಡ ಹಬ್ಬ ಎಂದು ಆಚರಿಸಲಾಗುತ್ತದೆ. ಇದನ್ನು ಕರ್ನಾಟಕ ಸರ್ಕಾರ (GoK) ಜನರ ತೆರಿಗೆ ಹಣದಿಂದ ನಡೆಸುತ್ತದೆ. ಇದು ಮೈಸೂರಿನ ಹಳೆಯ ಅರಸರ 1 ಅಥವ ಬೇರೆ ಯಾವುದೆ ವ್ಯಕ್ತಿಯ ಖಾಸಗಿ ಕಾರ್ಯಕ್ರಮವಲ್ಲ. ವಾಸ್ತವದಲ್ಲಿ, ಹಳೆಯ ಅರಸರ ಕುಟುಂಬಕ್ಕೆ ತಮ್ಮದೇ ಖಾಸಗಿ ದರ್ಬಾರನ್ನು ನಡೆಸಿಕೊಳ್ಳಲು ಅವಕಾಶವಿದೆ.

ದಸರಾ ಹಬ್ಬದ ಮುಖ್ಯ ಅತಿಥಿಗಳನ್ನು ಸಾಮಾನ್ಯವಾಗಿ ದೇಶಕ್ಕೆ, ರಾಜ್ಯಕ್ಕೆ ಹಾಗೂ ಭಾಷೆಗೆ ಕೊಡುಗೆ ನೀಡಿರುವ ಆಧಾರದ ಮೇಲೆ ಆಹ್ವಾನಿಸುವ ಸಂಪ್ರದಾಯವಿದೆ. ಅದರಿಂದಾಗಿಯೇ ತಾವು ಕೆ.ಎಸ್. ನಿಸ್ಸಾರ್ ಅಹ್ಮದ್, ಹಂಪನ, ದ್ರೌಪದಿ ಮುರ್ಮು, ಸುಧಾ ಮೂರ್ತಿ, ಎಸ್.ಎಂ. ಕೃಷ್ಣ, ಇನ್ನೂ ಮುಂತಾದವರುಗಳನ್ನು ಉದ್ಘಾಟನೆಗೆ ಆಹ್ವಾನಿಸಿರುವುದನ್ನು ನೋಡಿದ್ದೀರಿ.

ಭಾನು ಮುಶ್ತಾಕ್ ಮತ್ತು ದೀಪ ಭಾಸ್ತಿ

ಆದ್ದರಿಂದ ಭಾನು ಮುಶ್ತಾಕ್ ಅವರನ್ನು ಆಹ್ವಾನಿಸಿ, ಅವರು ಅದನ್ನು ಸ್ವೀಕರಿಸಿದಾಗ ನನಗೆ ಆಶ್ಚರ್ಯವಾಗಲಿಲ್ಲ. ಅವರು ನಮ್ಮ ದೇಶ, ರಾಜ್ಯ ಹಾಗೂ ನಾವು ಮಾತನಾಡುವ ಭಾಷೆಗೆ ಗೌರವ ಹಾಗೂ ಪ್ರಶಸ್ತಿಗಳನ್ನು ತಂದಿದ್ದಾರೆ. ಹಾಗಾಗಿ ಅವರನ್ನು ದಸರಾ ಹಬ್ಬದ ಉದ್ಘಾಟನೆಗೆ ಆಹ್ವಾನಿಸಿರುವುದು ಸಹಜ.

ಆದರೆ ಕರ್ನಾಟಕದ ಒಂದು ವಲಯ, ಕನ್ನಡ ಭಾಷೆ ಹಿಂದುಗಳದ್ದೇ ಎಂಬ ತಪ್ಪು ಕಲ್ಪನೆಯಲ್ಲಿದೆ. ಅವರು ಅಲ್ಪಸಂಖ್ಯೆಯವರಾಗಿದ್ದರೂ (ಫ್ರಿಂಜ್) ಅವರ ಹಾವಳಿ/ಗಲಾಟೆ ಮಾತ್ರ ಜೋರು. ಅವರು ಆಕೆಯ ಹಳೆಯ ಭಾಷಣ ನೋಡಿ, ಅದರಲ್ಲಿ “ಕನ್ನಡವನ್ನು ಹಿಂದೂ ದೇವಿಯಾಗಿ ಮಾಡಿ, ಉಳಿದವರ ಕೈಗೆಟುಕದಂತೆ ಮಾಡಲು ಈ ವಲಯ ಪ್ರಯತ್ನಿಸುತ್ತಿದೆ” ಎಂಬ ಆಕೆಯ ಅಭಿಪ್ರಾಯವನ್ನ ಕೇಳಿ, ಕೆರಳಿದ್ದಾರೆ. ನನ್ನ ದೃಷ್ಟಿಯಲ್ಲಿ ಅದಕ್ಕೆ ಹಲವಾರು ಕಾರಣಗಳಿವೆ:

  • ಆಕೆ ಮುಸ್ಲಿಂ
  • ಆಕೆ ಹೆಂಗಸು
  • ಆಕೆ ಮುಸ್ಲಿಂ ಹೆಂಗಸು ಹಾಗೂ ಜಗತ್ತಿನಾದ್ಯಂತ ಕನ್ನಡಿಗರಿಂದ ಪ್ರೀತಿಸಲ್ಪಟ್ಟವಳು
  • ಆಕೆ ಮುಸ್ಲಿಂ ಹೆಂಗಸು, ಹಾಗೂ ಈಗ ಭಾರತ ಹೊರಗೆ ಅತಿ ಜನಪ್ರಿಯ ಕನ್ನಡತಿ. ಆಕೆ ಕನ್ನಡಿಗರನ್ನು ಪ್ರತಿನಿಧಿಸುತ್ತಾಳೆ
  • ಆಕೆ ತನ್ನ ಮನಸ್ಸಿನ ಮಾತು ಹೇಳಲು ಹೆದರುವವಳಲ್ಲ
  • ಆಕೆ ಭಾಷೆಯನ್ನು ದೇವರಂತಲ್ಲ, ಭಾಷೆಯಂತೆ ನೋಡುವಷ್ಟು ವಾಸ್ತವವಾದಿ

ಇತ್ತೀಚೆಗೆ ಆಕೆಯ ಆ ಭಾಷಣದ ಒಂದು ಭಾಗ ವೈರಲ್ ಆದ ನಂತರ, ನಾನು ಆಕೆ ಹಾಗು ಇತರರೂ ಹಂಚಿಕೊಂಡ ಸಂಪೂರ್ಣ ಭಾಷಣ ನೋಡಿದೆ. ಆಕೆ ಹೇಳಿದುದರಲ್ಲಿ ನನಗೆ ಯಾವುದೇ ತೊಡಕು ಕಾಣಿಸಲಿಲ್ಲ.

ಅದರೆ ಕೆಲವರಿಗೆ ಆಕೆಯ ಅಭಿಪ್ರಾಯವನ್ನ ಅರಗಿಸಿಕೊಳ್ಳಲಾಗಲಿಲ್ಲ, ಬಾನುರವರಿಂದ ದಸರಾ ಉದ್ಘಾಟನೆ ತಡೆಯಲು ಹೈಕೋರ್ಟ್‌ಗೆ ಹೋದರು. ಅಲ್ಲಿ ತಿರಸ್ಕೃತಗೊಂಡ ನಂತರ, ಸುಪ್ರೀಂಕೋರ್ಟ್‌ಗೆ ಹೋಗಿ ಮತ್ತೆ ತಿರಸ್ಕೃತಗೊಂಡಿದ್ದಾರೆ.

ಕೋರ್ಟ್‌ಗಳು ಬಾನುರವರ ಆಯ್ಕೆಯನ್ನು ತಾರ್ಕಿಕವೆಂದು ಕಂಡದ್ದು ನನಗೆ ಸಂತೋಷ ತಂದಿದೆ. ಭಾನು ಮುಶ್ತಾಕ್, ಕರ್ನಾಟಕ ಹಾಗೂ ಕನ್ನಡದ ವಿರುದ್ಧ ದ್ವೇಷಪೂರ್ಣ ಪೋಸ್ಟ್‌ಗಳು ಬರಲಿವೆ ಎಂಬುದು ನನಗೆ ಗೊತ್ತಿದೆ. ನಾನು ಇದನ್ನು ಕೇರಳ ಹಾಗೂ ಮಲಯಾಳಂ ವಿರುದ್ಧವೂ ಕಂಡಿದ್ದೇನೆ. ಇದೇನು ಹೊಸದಲ್ಲ.

ಸದ್ಯಕ್ಕೆ, ನೀವು ಆಕೆಯ ಬರಹಗಳನ್ನು ಓದಿಲ್ಲದಿದ್ದರೆ, ಕೊಳ್ಳಲು ಹಾಗು ಓದಲು, ಇದೆ ಸರಿ ಸಮಯ.


Senior Advocate PB Suresh, for the petitioner, submitted that a non-Hindu person cannot be allowed to perform the pujas. Justice Nath then pronounced, “Dismissed.”

Suresh then submitted that puja inside a temple cannot be regarded as a secular act. “It’s purely political…no reason why they should be brought inside temple for religious activity…,”he said. Justice Nath then repeated, “Dismissed.”

The senior counsel, undeterred, further alleged that the invitee had made certain objectionable remarks in the past hurting religious sentiments and said that such a person cannot be invited. Justice Nath repeated that the matter has been dismissed
“We have said ‘dismissed’ 3 times. How many dismissals are required?” Justice Nath commented.


You can read this blog using RSS Feed. But if you are the person who loves getting emails, then you can join my readers by signing up.

Join 2,259 other subscribers

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.