ಕನ್ನಡ ಪ್ರಭಕ್ಕೆ ಏನಾಗಿದೆ? ನೀವೇ ಹೇಳಿ

ಕನ್ನಡ ಪ್ರಭದಲ್ಲಿ ಅಚ್ಚಾದ ಈ ಲೇಖನವನ್ನು ಓದುವಾಗ ಅನ್ನಿಸ್ಸಿದ್ದು "ಕನ್ನಡ ಪ್ರಭಕ್ಕೆ ಏನಾಗಿದೆ?" ತಲೆ ಕೆಟ್ಟಿದೆ ಅಂತ ಅನ್ನಿಸದೇ ಇರದು ಅಲ್ವ?

ಉಮೇಶ್ ರೆಡ್ಡಿಗೆ ಮಹಿಳೆಯರ ಒಳ ಉಡುಪನ್ನು ಕದಿಯುವುದರಲ್ಲಿ, ಸಂಗ್ರಹಿಸುವುದರಲ್ಲಿ ಮಜಾ ಸಿಗುತ್ತದೆ ಎಂಬ ಕಾರಣಕ್ಕೆ ಅದು Individual Freedom ಎಂದು ಸುಮ್ಮನಾಗಲು ಸಾಧ್ಯವೆ?

ನೀವೇ ಹೇಳಿ ಯಾರು ಪ್ರೀತಿಸುವ ಹಕ್ಕಿನ Individual Freedomನ್ನು ವಿರೋಧಿಸಲು ಉಮೇಶ್ ರೆಡ್ಡಿಯ ಉದಾಹರಣೆ ಕೊಡ್ತಾರೆ?

ಎಂಥೆಂಥಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವ ಈ ಕಾಲದಲ್ಲಿ ಸಲಿಂಗ ಕಾಮವೆಂಬ ವ್ಯಾಧಿಗೂ ಸಲಹೆ, ಮಾರ್ಗದರ್ಶನ ಅಥವಾ ಇನ್ನಿತರ ಪರಿಹಾರಗಳನ್ನು ಕಂಡುಕೊಳ್ಳಲು ಏಕೆ ಪ್ರಯತ್ನಿಸಬಾರದು?

ಯಾವ ವಿದ್ಯಾವಂತ ವೃತ್ತ ಪತ್ರಿಕೆಯ ಅಂಕಣಕಾರ ಸಲಿಂಗಿಯರನ್ನು ರೋಗಿಗಳು ಅಂತ ಕರೀತಾರೆ?

ನೀವೇ ಹೇಳಿ? ಕನ್ನಡ ಪ್ರಭಕ್ಕೆ ಏನಾಗಿದೆ?