Category: ಕನ್ನಡ

1

ಸುಟ್ಟ ಜೋಳ ಮತ್ತು ಕಾರ ಹಾಕಿದ ಮಾವಿನಕಾಯಿ

ಮುತ್ತಾನಲ್ಲೂರು ಬಿಟ್ಟ ಮೇಲೆ ನಾವು ಹೆಬ್ಬಗೋಡಿಗೆ ಬಂದೆವು. ಅಪ್ಪ, ಅಮ್ಮ ಇಬ್ಬರಿಗೂ ಆನೇಕಲ್ ಹತ್ತಿರ ಕೆಲಸ. ಮುತ್ತಾನಲ್ಲೂರು ಬಿಡುವಾಗಲೆ ಅಪ್ಪನಿಗೆ ಆನೇಕಲ್‌ಗೆ ಸ್ಥಳಾಂತರವಾದರೆ ಅನುಕೂಲ ಎನ್ನುವ ಯೋಚನೆ. ಅದರೆ ಅಮ್ಮನಿಗೆ ಅಲ್ಲಿಯ ಯಾವುದೇ ಶಾಲೆ ಇಷ್ಟವಾಗಲಿಲ್ಲ. ಅವಳ ಕಾನ್ವೆಂಟ್ ಶಾಲೆಯ ಒಳ್ಳೆಯ ಅನುಭವದ ಹಿನ್ನಲೆಯೋ ಏನೋ, ಕಾನ್ವೆಂಟ್ ಶಾಲೆಗಳ ಮೇಲೆ ಅಪಾರ ನಂಬಿಕೆ. ಅಮ್ಮ ನಮ್ಮನ್ನು ಎಸ್.ಎಫ್.ಎಸ್ ಕನ್ನಡ ಮಾಧ್ಯಮ ಶಾಲೆಗೆ ಸೇರಿಸಿದಳು. ಆಗ ನಾನು ಮೂರನೆಯ ಹಾಗು ತಂಗಿ ಎರಡನೆಯ ತರಗತಿ. ಮೊದಲ...

0

ನಿನ್ನ ತಪ್ಪಿಗೆ ನೀನೆ ಹೊಣೆ

ಮುತ್ತಾನಲ್ಲೂರು ಬಿಟ್ಟರೂ, ಅಮ್ಮ ಅಲ್ಲಿನ ಸಂಬಂಧಗಳನ್ನು ಬಿಡಲಿಲ್ಲ. ಆಗಾಗ ಹೋಗುವುದು ಇದ್ದೇ ಇತ್ತು. ಅಮ್ಮ ಆ ಊರಿಗೆ ಬಂದಾಗ ಇಪ್ಪತ್ತೆರಡೋ ಇಪ್ಪತ್ಮೂರೋ ವಯಸ್ಸು. ಅಮ್ಮನಿಗೆ ಸ್ವಂತಿಕೆ, ಸಂಬಳ, ಗೌರವ, ಸ್ನೇಹಿತರು, ಪ್ರೀತಿ, ಮುಂದೆ ಕುಟುಂಬ ಕೊಟ್ಟ ಊರದು. ಅದು ಅಮ್ಮನಿಗೆ ಮರು ಹುಟ್ಟು ಕೊಟ್ಟ ಊರು ಅಂತಲೆ ಅವಳ ಭಾವನೆ. ಈಗ ೨೦೧೭ರ ಬೆಂಗಳೂರಿನಲ್ಲಿ ಒಂಟಿ ಹೆಣ್ಣು ಮಕ್ಕಳಿಗೆ ಮನೆ ಬಾಡಿಗೆ ಕೊಡಲು ಯೋಚನೆ ಮಾಡುವ ಮನಸ್ಥಿತಿ ಇರುವಾಗ, ಆಗ ಚಿಕ್ಕರಾಮರೆಡ್ಡಿ ಹಾಗು ಚೆನ್ನಕ್ಕ...

0

ನಾಗರತ್ನಮ್ಮನ ಬಾಲಗಳು

ನನಗೆ ತುಂಬಾ ನೆನಪಿಗೆ ಬರುವ ಬಾಲ್ಯದ, ಅಮ್ಮನ ಸಂಗತಿಗಳು ಅಂದರೆ ಶಾಲೆ. ನನ್ನ ಶಾಲೆಯಲ್ಲ ನನ್ನಮ್ಮನ ಶಾಲೆ. ನಾವಾಗ ಇದ್ದದ್ದು ಆನೇಕಲ್ ತಾಲೂಕಿನ ಮುತ್ತಾನಲ್ಲೂರು ಹಳ್ಳಿಯಲ್ಲಿ. ಅಲ್ಲಿನ ಸರಕಾರಿ ಶಾಲೆಯಲ್ಲಿ ಅಮ್ಮ ಶಿಕ್ಷಕಿ. ಅದೇ ಊರಿನ ಸರಕಾರಿ ಪಶುವೈದ್ಯ ಶಾಲೆಯಲ್ಲಿ ಅಪ್ಪ ಕಾಂಪೌಂಡರ್. ಆ ಊರಿನಲ್ಲಿ ಯಾವ ಬೇಬಿ ಸಿಟ್ಟಿಂಗ್ ಇರಲಿಲ್ಲ. ನಮಗ್ಯಾವ ನೆಂಟರು ಇರಲಿಲ್ಲ. ಸಹಾಯಕಿಯನ್ನು ಇಟ್ಟುಕೊಳ್ಳುವಷ್ಟು ಸ್ಥಿತಿವಂತರೇನಾಗಿರಲಿಲ್ಲ. ಅದರೆ ಅಂಗನವಾಡಿ ಇತ್ತು. ಅದನ್ನ ನೋಡಿಕೋಳ್ತಾ ಇದ್ದವರು ರತ್ನಮ್ಮನವರು. ನಂತರ ಅವರು ಅಮ್ಮನ...

ಪ್ರಜಾವಾಣಿ 1

ನನ್ನ ಕನ್ನಡ ದಿನ ಪತ್ರಿಕೆ

ನಮ್ಮನೆಯಲ್ಲಿ ಮೊದಲಿಂದಲೂ ಕನ್ನಡ ದಿನ ಹಾಗು ವಾರ ಪತ್ರಿಕೆಗಳನ್ನು ಕೊಳ್ಳುವ ಹಾಗೂ ಓದುವ ಹವ್ಯಾಸ ಇತ್ತು. ಸುಧಾ, ತರಂಗ, ಲಂಕೇಶ್ ಮುಂತಾದ ವಾರಪತ್ರಿಕೆಗಳ ಜೋತೆ ಕನ್ನಡ ಪ್ರಭ, ಶಾಲೆಯಲ್ಲಿ ಹಿಂದೂ, ಟೈಮ್ಸ್ ಆಫ್ ಇಂಡಿಯಾ, ಪ್ರಜಾವಾಣಿ ಇನ್ನೂ ಮುಂತಾದವು. ಸಮಯ ಬದಲಾದಂತೆ, ಪತ್ರಿಕೆಯು ಬದಲಾಯಿತು. ನಂತರ ವಿಜಯ ಕರ್ನಾಟಕ ಬಂತು. ಈಗ ಸದ್ಯಕ್ಕೆ ವಿಜಯವಾಣಿ ಓಡುತ್ತಿದೆ ನನ್ನ ತಾಯಿ ಮನೇಲಿ. ನನ್ನ ಮದುವೆ ನಂತರ ಕನ್ನಡ ಪತ್ರಿಕೆ ತರಿಸುವ ಜವಾಬ್ದಾರಿ ನನ್ನ ಮೇಲೆ ಬಿತ್ತು....

0

ಅಮ್ಮ ಹಾಗು ಮನುಷ್ಯನ ಪ್ರಯತ್ನ

ಅಮ್ಮನಿಗೆ ತುಂಬ ನಂಬಿಕೆಯಿದ್ದದ್ದು ಮನುಷ್ಯನ ಪ್ರಾಮಾಣಿಕ ಪ್ರಯತ್ನದ ಮೇಲೆ. ಹಾಗಂತ ಆಕೆಯೇನು ನಾಸ್ತಿಕಳಾಗಿರಲಿಲ್ಲ. ಆಕೆಯ ದೇವರ ಕಲ್ಪನೆ ಸ್ವಲ್ಪ ವಚನಕಾರರನ್ನು ಹೋಲುತಿದ್ದದ್ದು ಕಾಕತಾಳಿಯವೇನಲ್ಲ. ಕೆಲಸ, ಶಿಸ್ತು, ಪ್ರಾಮಾಣಿಕತೆ, ದುಡಿಮೆ, ಸಮಾನತೆ ಹಾಗು ಮನುಷ್ಯ ಪ್ರಯತ್ನಗಳ ಮೇಲೆ ಆಕೆಗೆ ನಂಬಿಕೆ ಜಾಸ್ತಿ. ಅಮ್ಮ ಕೆಲವು ಹಬ್ಬ, ಹರಿದಿನಗಳನ್ನು ಸಂಭ್ರಮದಿಂದ ಆಚರಿಸುತಿದ್ದರು (ಸಂಕ್ರಾಂತಿ ಹಾಗು ಯುಗಾದಿ ಆಕೆಯ ನೆಚ್ಚಿನ ಹಬ್ಬಗಳು), ಆಕೆಯ ದೇವರ ಮೇಲಿನ ನಂಬಿಕೆ ಮೂಢನಂಬಿಕೆಗಳಾಗಿರಲಿಲ್ಲ. ಆಕೆ ಒಂದು ದಿನವೂ ವಿಗ್ರಹದ ಮುಂದೆ ಕುಳಿತು ಪ್ರಾರ್ಥನೆ...

1

ನಾನು, ರವಿ ಬೆಳೆಗೆರೆ ಹಾಗು ಮಾರ್ಕ್ವೆಜ್

ನನ್ನ ಮೊದಲನೆ ಕನ್ನಡದ ಪೊಡ್ ಕಾಸ್ಟ್. ನಿಮ್ಮ ಅಭಿಪ್ರಾಯ ತಿಳಿಸಿ. ರವಿ ಬೆಳೆಗೆರೆ Marquez touched Kannada sensibility ಮಾಂಡೋವಿ https://thejeshgn.com/blog/wp-content/uploads/2014/04/04-20-2014-145823.mp3Podcast: Play in new window | Download (Duration: 4:28 — 4.1MB)Subscribe: RSS