Location: Bengaluru
ನನಗಿಬ್ಬರೂ ಒಂದೇ
ನನಗೆ ಸುಮಾರು ೧೦ ವರ್ಷವಾದಾಗ ಅಮ್ಮ ನನ್ನನ್ನು ಮನೆ ಕೆಲಸಕ್ಕೆ ಹಚ್ಚಿದಳು. ಬೇರೆಯವರ ಮನೆ ಅಲ್ಲ ನಮ್ಮನೆ ಕೆಲಸ. ಅಲ್ಲಿಯವರೆಗು ಅಮ್ಮ ತನ್ನ ಕೆಲಸದ ಜೊತೆ ಮನೆ ಕೆಲಸ ಮಾಡುತ್ತಿದ್ದರು. ಅಪ್ಪ ಕೆಲಸದ ಜೊತೆ ಮನೆಗೆ ಸಂಬಂಧಿಸಿದ ಹೊರಗಿನ ಕೆಲಸ ಮಾಡುತಿದ್ದರು. ನಮಗೆ ೧೦ ವರ್ಷವಾದ ತಕ್ಷಣ ಅವರ ಕೆಲಸಗಳನ್ನು ನಮ್ಮೊಡನೆ ಹಂಚಿಕೊಳ್ಳಲು ಪ್ರಾರಂಭಿಸಿದರು. ಸ್ವಲ್ಪ ವ್ಯತ್ಯಾಸ ಅಂದರೆ ಅಮ್ಮ ನಮಗೆ ಹೊರಗಿನ ಕೆಲಸ, ಮನೆಯೊಳಗಿನ ಕೆಲಸ ಅಂತ ಭೇದ ಭಾವ ಮಾಡಲಿಲ್ಲ. ಪಾತ್ರೆ...
ಸುಟ್ಟ ಜೋಳ ಮತ್ತು ಕಾರ ಹಾಕಿದ ಮಾವಿನಕಾಯಿ
ಮುತ್ತಾನಲ್ಲೂರು ಬಿಟ್ಟ ಮೇಲೆ ನಾವು ಹೆಬ್ಬಗೋಡಿಗೆ ಬಂದೆವು. ಅಪ್ಪ, ಅಮ್ಮ ಇಬ್ಬರಿಗೂ ಆನೇಕಲ್ ಹತ್ತಿರ ಕೆಲಸ. ಮುತ್ತಾನಲ್ಲೂರು ಬಿಡುವಾಗಲೆ ಅಪ್ಪನಿಗೆ ಆನೇಕಲ್ಗೆ ಸ್ಥಳಾಂತರವಾದರೆ ಅನುಕೂಲ ಎನ್ನುವ ಯೋಚನೆ. ಅದರೆ ಅಮ್ಮನಿಗೆ ಅಲ್ಲಿಯ ಯಾವುದೇ ಶಾಲೆ ಇಷ್ಟವಾಗಲಿಲ್ಲ. ಅವಳ ಕಾನ್ವೆಂಟ್ ಶಾಲೆಯ ಒಳ್ಳೆಯ ಅನುಭವದ ಹಿನ್ನಲೆಯೋ ಏನೋ, ಕಾನ್ವೆಂಟ್ ಶಾಲೆಗಳ ಮೇಲೆ ಅಪಾರ ನಂಬಿಕೆ. ಅಮ್ಮ ನಮ್ಮನ್ನು ಎಸ್.ಎಫ್.ಎಸ್ ಕನ್ನಡ ಮಾಧ್ಯಮ ಶಾಲೆಗೆ ಸೇರಿಸಿದಳು. ಆಗ ನಾನು ಮೂರನೆಯ ಹಾಗು ತಂಗಿ ಎರಡನೆಯ ತರಗತಿ. ಮೊದಲ...
ನಿನ್ನ ತಪ್ಪಿಗೆ ನೀನೆ ಹೊಣೆ
ಮುತ್ತಾನಲ್ಲೂರು ಬಿಟ್ಟರೂ, ಅಮ್ಮ ಅಲ್ಲಿನ ಸಂಬಂಧಗಳನ್ನು ಬಿಡಲಿಲ್ಲ. ಆಗಾಗ ಹೋಗುವುದು ಇದ್ದೇ ಇತ್ತು. ಅಮ್ಮ ಆ ಊರಿಗೆ ಬಂದಾಗ ಇಪ್ಪತ್ತೆರಡೋ ಇಪ್ಪತ್ಮೂರೋ ವಯಸ್ಸು. ಅಮ್ಮನಿಗೆ ಸ್ವಂತಿಕೆ, ಸಂಬಳ, ಗೌರವ, ಸ್ನೇಹಿತರು, ಪ್ರೀತಿ, ಮುಂದೆ ಕುಟುಂಬ ಕೊಟ್ಟ ಊರದು. ಅದು ಅಮ್ಮನಿಗೆ ಮರು ಹುಟ್ಟು ಕೊಟ್ಟ ಊರು ಅಂತಲೆ ಅವಳ ಭಾವನೆ. ಈಗ ೨೦೧೭ರ ಬೆಂಗಳೂರಿನಲ್ಲಿ ಒಂಟಿ ಹೆಣ್ಣು ಮಕ್ಕಳಿಗೆ ಮನೆ ಬಾಡಿಗೆ ಕೊಡಲು ಯೋಚನೆ ಮಾಡುವ ಮನಸ್ಥಿತಿ ಇರುವಾಗ, ಆಗ ಚಿಕ್ಕರಾಮರೆಡ್ಡಿ ಹಾಗು ಚೆನ್ನಕ್ಕ...
ನಾಗರತ್ನಮ್ಮನ ಬಾಲಗಳು
ನನಗೆ ತುಂಬಾ ನೆನಪಿಗೆ ಬರುವ ಬಾಲ್ಯದ, ಅಮ್ಮನ ಸಂಗತಿಗಳು ಅಂದರೆ ಶಾಲೆ. ನನ್ನ ಶಾಲೆಯಲ್ಲ ನನ್ನಮ್ಮನ ಶಾಲೆ. ನಾವಾಗ ಇದ್ದದ್ದು ಆನೇಕಲ್ ತಾಲೂಕಿನ ಮುತ್ತಾನಲ್ಲೂರು ಹಳ್ಳಿಯಲ್ಲಿ. ಅಲ್ಲಿನ ಸರಕಾರಿ ಶಾಲೆಯಲ್ಲಿ ಅಮ್ಮ ಶಿಕ್ಷಕಿ. ಅದೇ ಊರಿನ ಸರಕಾರಿ ಪಶುವೈದ್ಯ ಶಾಲೆಯಲ್ಲಿ ಅಪ್ಪ ಕಾಂಪೌಂಡರ್. ಆ ಊರಿನಲ್ಲಿ ಯಾವ ಬೇಬಿ ಸಿಟ್ಟಿಂಗ್ ಇರಲಿಲ್ಲ. ನಮಗ್ಯಾವ ನೆಂಟರು ಇರಲಿಲ್ಲ. ಸಹಾಯಕಿಯನ್ನು ಇಟ್ಟುಕೊಳ್ಳುವಷ್ಟು ಸ್ಥಿತಿವಂತರೇನಾಗಿರಲಿಲ್ಲ. ಅದರೆ ಅಂಗನವಾಡಿ ಇತ್ತು. ಅದನ್ನ ನೋಡಿಕೋಳ್ತಾ ಇದ್ದವರು ರತ್ನಮ್ಮನವರು. ನಂತರ ಅವರು ಅಮ್ಮನ...
Maximum Change
It’s been two months that Max has been with us. It seems like he has been with us forever. I must say he has changed us more than anything else. No matter what; we need to wake up early to take him out for walk and cook for him. In a way I...